Saturday, September 29, 2007

’ಉದಯರಾಗ’

ಮನಸ್ಸಿನ ಸ್ಕಂದತೆಯನ್ನು ತೋರೆಸಿ ಹೊಸ ದಿಕ್ಕಿನಡೆಗೆ ನವ ರಶ್ಮಿಯ ಕಿರಣವನ್ನು ಸೂಸುವ ಶಕ್ತಿಯುತವಾದ ಕಾದಂಬರಿ, ಏಷ್ಟೊ ಕಾದಂಬರಿಯನ್ನೊದಿರುವೆ ಆದರೆ ಎಲ್ಲೊ ನನ್ನ ಮನಸ್ಸು ಅದರ ವಿಚಾರಸಂಕೀರ್ಣಗಳ ಜೊತೆ ಸೆಣಸಾಡಿ ಕೆಲವಷಟನ್ನು ಒಪ್ಪಿರುವೆ ಕೆಲವು ತುಲನೆಗು ಸಿಲುಕದ ಪ್ರಶ್ನೆಗಳಾದವು, ಅದು ಅಗಾಗ ಮನಸ್ಸನ್ನು ಕಾಡುವಂತಾದವು. ಅದಕ್ಕೆ ಉದಾ: (’ನಾಕು ತಂತಿ’, ’ಮಂದ್ರ’,’ಅಳುವ ಕಡಲೊಳು(ಪದ್ಯ)’) ಇಲ್ಲಿ ಅದರ ಸ್ವರೂಪಕ್ಕೆ ತಕ್ಕಂತೆ ನೂರಾರು ಪ್ರಶ್ನೆ ಗಳು ನನ್ನ ಕಾಡಿದವು. ಅದಕ್ಕೆ ಉತ್ತರವೆಂಬಂತೆ ಉದಯರಾಗ ಸೂಕ್ತವೆನಿಸಿತು. ಚಿಕ್ಕ ಪುಸ್ತಕ ಅಗಾದವಾದ ಶೃಷ್ಟಿ ’ಮಾಣಿ(ಕತಾ ನಾಯಕ)’ ಬೆಳೆದು ಬಂದ ಹಾದಿ ನನ್ನ ಮನಸ್ಸಲ್ಲಿ ಕಲಾವಿದನ ಬದುಕು ಏನೆಂಬುದು ಮನವರಿಕೆಯಾಯ್ತು. ಕಲಾವಿದನ ಕಲೆ ಏನಾದರು ಸೊರಗಲೊಲ್ಲದು, ಅದು ಕಾಲ, ಸಮಯಕ್ಕೆ ಅನುಗುಣವಾಗಿ ಕಲೆಯಲ್ಲಿ ಪ್ರತ್ಯಕ್ಷವಾಗುತ್ತೆ, ಸಾಮಾನ್ಯರ ಮನಸ್ಸಿಗಿಂತ ಕಲಾವಿದನ ಮನಸ್ಸು ಯಾಕಷ್ಟು ಸೂಕ್ಷ್ಮ? ನೂರಾರು ಕಲಾವಿದರಿಗೆ ಕಲೆಯೆ ತಮ್ಮ ಒಡಲಬೆಂಕಿಯಾಗಿ ಸುಟ್ಟಿದೆ. ತಮ್ಮ ಮನಸ್ಸಿನ ದೌರ್ಬಲ್ಯವನ್ನು ಕಲಾವಿದ ಹಿಂಗಿಸಿಕೊಳ್ಳಲಿಕ್ಕಾಗಿ ಕಲೆಯನ್ನೆ ಮುಡಿಪಾಗಿಟ್ಟು ತಮ್ಮಲ್ಲೆ ಆತ್ಮವಂಚನೆಗೆ ಗುರಿಯಾಗುವರು. ಅವರ ಕಲೆ ನಾಡಿಗೆ ಅಪೂರ್ವ ಎಂದು ತೋರಿಸುವ ಮುಂಚೆಯೆ ಮಣ್ಣಾಗಿರುವರು. ಕಲಾವಿದನ ದೃಷ್ಟಿಕೋನವನ್ನು ನವರಸಗಳು ಹೆಚ್ಚು ಬೆಳಸಬೇಕಲ್ಲದೆ ದೃಷ್ಟಿಹಿನನನ್ನಾಗಿ ಮಾಡಬಾರದು ಅಲ್ವ. ಆ ನಿಟ್ಟಿನಲ್ಲಿ ’ಉದಯರಾಗ’ ನೊಂದ ಕಲಾವಿದರ ಮನಸ್ಸಿಗೆ ನಿಜಕ್ಕೂ ಮರುಜನ್ಮ ನೀಡುವಂತಹುದು ಎನಿಸಿತು....

Saturday, September 22, 2007

ಸಂದ್ಯಾರ್‍ಆಗ ಒದಿ ಮುಗಿಸಿದಾಯ್ಥು ತುಮ್ಬನೆ ಕುಶಿ ಅಯ್ಥು, ನಮ್ಮ ಕನ್ನಡದಲ್ಲೆ ಸಾಕಷ್ಟು ಶಾಸ್ಥ್ರಿಯ ಸಂಗೀತಕ್ಕೆ ಅಲವಡಿಸಬಹುದಾದನ್ತ ’ಕ್ರಿತಿ’ ಗಳಿವೆ ಎನ್ದು ತೊರಿಸಿರುವ ಪರಿ ಅನನ್ಯ, ಅವರು ಅನ್ತ:ಪ್ರಯ್ತ್ನ ಮಾಡಿದರು ಇಲ್ಲಿ ದಾಸರ ಸಾಹಿತ್ಯ ಎನ್ದು ಬಿರಿದು ಕೂಟ್ಟು ದೂರ ಇಟ್ಟು ಪುನಹ ತಮಿಳು, ತೆಲುಗು ’ಕ್ರಿತಿ’ ಗಳ ಮೊರೆ ಹೊದೆವು, ಅದು ನಮ್ಮ ದುರದ್ರುಷ್ಟ. ಎರವಲು ಪಡೆಯೊದು ನಮ್ಮಲ್ಲಿ ಮೈಗುಡಿದೆ ಯನಿಸಿತು, ಎಷ್ಟೆ ’ಸಂಗೀತ’ ಕಚೇರಿಗಳಾದರು ಅಲ್ಲಿ ನಮ್ಮ ಕನ್ನಡ ಹಾಡುಗರರು ಹಾಡುವುದು ತಮಿಳು, ತೆಲುಗು ಕ್ರಿಥಿ ಗಳನ್ನು ಅದು ಅವರಿಗು ಅರ್ಥವಗಿರೊಲ್ಲ,ಇನ್ನು ಕೆಳುಗರಿಗೆ ಅಷ್ಟಕಷ್ತೆ.
ಆದ್ರು ದೇಶಿ ಸಂಗೀತ ಉತ್ಥೆಜನಕ್ಖಗಿ ಬರೆದ ಈ ಕಾದಂಬರಿ ಅತ್ಯಮೂಲ್ಯ ಎನಿಸಿತು. ಲಕ್ಷ್ಮಣ(ಕಥಾನಾಯಕ) ತನ್ನ ನಿಸ್ವಾರ್ಥ ಭಾವನೆಯಲ್ಲಿ ’ಸಂಗೀತಕ್ಕೆ ’ ಕ್ಕೆ ಸೂಕ್ತ ’ನ್ಯಾಯ’ ಒದಗಿಸಿದ್ದಾರೆ
ಆಗು ಅದರ ಮುಕ್ತಾಯ ವೊನ್ತು ’ಪುರ್ವಿ’ ಮುಲಕ ಮನಸ್ಸಿನ ಮೇಲೆ ಅಗಾದವಾದ ಪರಿಣಾಮ ಬೀರಿದ್ದಾರೆ.
’ಮಾತಾಡ್ ಮಾತಾಡ್ ಮಲ್ಲಿಗೆ’

ಇಂದು ನೋಡಿದೆ ಅತ್ಯುತ್ತಮ ಕಥಾವಸ್ತು, ಇಂತ ಆಶಾದಾಯಕ ಸಿನಿಮ ಬಹಳ ವರ್ಷಗಳ ತರುವಾಯ
ಕನ್ನಡದಲ್ಲಿ ಬಂದಿರುವುದು ತುಂಬ ಕುಶಿ ಕೊಟ್ಟಿದೆ.
ನಾವು ಎದುರುಸಿತ್ತಿರು ಜಾಗತೀಕರಣ ಎಂಬ ಬ್ರಮ್ಮರಾಕ್ಶಸನ ವಿರುದ್ದ ಒಂದು ಒಂಟಿ ದ್ವನಿ,
ಆ ದ್ವನಿ ಯ ಎದುರಾಗಿ ಸರ್ಕಾರ, ಬ್ರಷ್ಟ ರಾಜಕೀಯ ಮುಖಂಡರು, ತನ್ನ ಊರಿನವರು - ಆದರಿ ಆ ದ್ವನಿ
ಗೆ ಸಹಕಾರವಾಗಿ ನಿಲ್ಲುವ ’ನೆಕ್ಸಲ್ಲ’ ಅವರ ದೋರಣಿ ’ಬಂದೂಕ’ ಈ ದ್ವನಿ ಯ ದೋರಣಿ ’ಶಾಂತಿ’-
ಅದರ ಮೂಲಕ ನಾಡಿನ ಉದ್ದಗಲಕ್ಕು ಹರಡಿಸಿ ನ್ಯಾಯ ದೊರಕಿಸಿಕೊಳ್ಳುವ ದೃಶ್ಯ ಕಂಬನಿ ಮೂಡಿಸುವುದು.
ಆದರೆ ನಾವು ಅ ಜಾಗತೀಕರಣದಲ್ಲಿ ಮುಕ್ಯ ಪಾಲು ದಾರರಾಗಿದ್ದಿವಿ ಎನಿಸಿತು, ಅದರಲ್ಲಿ ನಮ್ಮದು ತುಂಬ
’ಶೇರ್’ ಗಳನ್ನು ಕೊಂಡು ಆ ಸಿನಿಮಾದ ವಿಮರ್ಶಕರಾಗಲಿಕ್ಕೆ ಮಾತ್ರ ಸಾದ್ಯ. ಒರೆತು .....
ನಮ್ಮ ನಾಡಿಗೆ ಜಾಗತೀಕರಣದಿಂದ ಬಂದೊದುಗುತ್ತಿರು ತೊಂದರೆಗಳ ಕಿರು ಪರಿಚಯವಾಯ್ತು..
ಕಡೆಯದಾಗಿ ಅಸಾಯಕ ಸ್ತಿಥಿ ನಮ್ಮದು ಅಲ್ವ?