Saturday, September 29, 2007

’ಉದಯರಾಗ’

ಮನಸ್ಸಿನ ಸ್ಕಂದತೆಯನ್ನು ತೋರೆಸಿ ಹೊಸ ದಿಕ್ಕಿನಡೆಗೆ ನವ ರಶ್ಮಿಯ ಕಿರಣವನ್ನು ಸೂಸುವ ಶಕ್ತಿಯುತವಾದ ಕಾದಂಬರಿ, ಏಷ್ಟೊ ಕಾದಂಬರಿಯನ್ನೊದಿರುವೆ ಆದರೆ ಎಲ್ಲೊ ನನ್ನ ಮನಸ್ಸು ಅದರ ವಿಚಾರಸಂಕೀರ್ಣಗಳ ಜೊತೆ ಸೆಣಸಾಡಿ ಕೆಲವಷಟನ್ನು ಒಪ್ಪಿರುವೆ ಕೆಲವು ತುಲನೆಗು ಸಿಲುಕದ ಪ್ರಶ್ನೆಗಳಾದವು, ಅದು ಅಗಾಗ ಮನಸ್ಸನ್ನು ಕಾಡುವಂತಾದವು. ಅದಕ್ಕೆ ಉದಾ: (’ನಾಕು ತಂತಿ’, ’ಮಂದ್ರ’,’ಅಳುವ ಕಡಲೊಳು(ಪದ್ಯ)’) ಇಲ್ಲಿ ಅದರ ಸ್ವರೂಪಕ್ಕೆ ತಕ್ಕಂತೆ ನೂರಾರು ಪ್ರಶ್ನೆ ಗಳು ನನ್ನ ಕಾಡಿದವು. ಅದಕ್ಕೆ ಉತ್ತರವೆಂಬಂತೆ ಉದಯರಾಗ ಸೂಕ್ತವೆನಿಸಿತು. ಚಿಕ್ಕ ಪುಸ್ತಕ ಅಗಾದವಾದ ಶೃಷ್ಟಿ ’ಮಾಣಿ(ಕತಾ ನಾಯಕ)’ ಬೆಳೆದು ಬಂದ ಹಾದಿ ನನ್ನ ಮನಸ್ಸಲ್ಲಿ ಕಲಾವಿದನ ಬದುಕು ಏನೆಂಬುದು ಮನವರಿಕೆಯಾಯ್ತು. ಕಲಾವಿದನ ಕಲೆ ಏನಾದರು ಸೊರಗಲೊಲ್ಲದು, ಅದು ಕಾಲ, ಸಮಯಕ್ಕೆ ಅನುಗುಣವಾಗಿ ಕಲೆಯಲ್ಲಿ ಪ್ರತ್ಯಕ್ಷವಾಗುತ್ತೆ, ಸಾಮಾನ್ಯರ ಮನಸ್ಸಿಗಿಂತ ಕಲಾವಿದನ ಮನಸ್ಸು ಯಾಕಷ್ಟು ಸೂಕ್ಷ್ಮ? ನೂರಾರು ಕಲಾವಿದರಿಗೆ ಕಲೆಯೆ ತಮ್ಮ ಒಡಲಬೆಂಕಿಯಾಗಿ ಸುಟ್ಟಿದೆ. ತಮ್ಮ ಮನಸ್ಸಿನ ದೌರ್ಬಲ್ಯವನ್ನು ಕಲಾವಿದ ಹಿಂಗಿಸಿಕೊಳ್ಳಲಿಕ್ಕಾಗಿ ಕಲೆಯನ್ನೆ ಮುಡಿಪಾಗಿಟ್ಟು ತಮ್ಮಲ್ಲೆ ಆತ್ಮವಂಚನೆಗೆ ಗುರಿಯಾಗುವರು. ಅವರ ಕಲೆ ನಾಡಿಗೆ ಅಪೂರ್ವ ಎಂದು ತೋರಿಸುವ ಮುಂಚೆಯೆ ಮಣ್ಣಾಗಿರುವರು. ಕಲಾವಿದನ ದೃಷ್ಟಿಕೋನವನ್ನು ನವರಸಗಳು ಹೆಚ್ಚು ಬೆಳಸಬೇಕಲ್ಲದೆ ದೃಷ್ಟಿಹಿನನನ್ನಾಗಿ ಮಾಡಬಾರದು ಅಲ್ವ. ಆ ನಿಟ್ಟಿನಲ್ಲಿ ’ಉದಯರಾಗ’ ನೊಂದ ಕಲಾವಿದರ ಮನಸ್ಸಿಗೆ ನಿಜಕ್ಕೂ ಮರುಜನ್ಮ ನೀಡುವಂತಹುದು ಎನಿಸಿತು....

1 comment:

ಗೌತಮ್ ಹೆಗಡೆ said...

putta haagu chokka baraha.